ಈ ಪೊಲಿಟಿಷಿಯನ್ ರಾಗಿಣಿಗೆ ಫೋನ್ ಮಾಡಿ ಬೆಡ್ ರೂಂಗೆ ಕರೆದ | Oneindia Kannada

2018-01-10 9,630

ನಟಿ ರಾಗಿಣಿ ಅವರನ್ನ ಪೊಲಿಟಿಷಿಯನ್ ಒಬ್ಬರು ಬೆಡ್ ರೂಂಗೆ ಕರೆದಿರುವುದು ನಿಜ. ಆದ್ರೆ, ಬೆಡ್ ರೂಂಗೆ ಕರೆದ ಆ ಪೊಲಿಟಿಶಿಯನ್ ಯಾರು? ಯಾಕೆ ಆ ರೀತಿ ಕರೆದ? ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮೂಡಿ ಬರುತ್ತಿರುವ 'ಭರ್ಜರಿ ಕಾಮಿಡಿ' ಶೋನಲ್ಲಿ ನಟಿ ರಾಗಿಣಿ ದ್ವಿವೇದಿ ತೀರ್ಪುಗಾರರಾಗಿದ್ದಾರೆ. ನಿರ್ದೇಶಕ ಗುರುಪ್ರಸಾದ್ ಮತ್ತು ದೊಡ್ಡಣ್ಣ ಅವರ ಜೊತೆ ರಾಗಿಣಿ ಕೂಡ ವೇದಿಕೆ ಹಂಚಿಕೊಂಡಿದ್ದಾರೆ. ಈ ವಾರದ ಎಪಿಸೋಡ್ ನಲ್ಲಿ ರಾಗಿಣಿ ಅವರಿಗೊಬ್ಬ ಅಭಿಮಾನಿ ಫೋನ್ ಮಾಡಿ ದೂರವಾಣಿ ಮೂಲಕ ಮಾತನಾಡಿದ್ದಾರೆ. ಈ ವೇಳೆ ತುಪ್ಪದ ಹುಡುಗಿ ಜೊತೆ ಮಾತನಾಡಿದ ಅಭಿಮಾನಿ, ಬೆಳಗಾವಿ ಕಡೆ ಬರುವಂತೆ ಕೋರಿಕೆ ಇಟ್ಟರು. ಅದಕ್ಕೆ ಪ್ರತಿಕ್ರಿಯಿಸಿದ ರಾಗಿಣಿ ನಾನು ಆ ಕಡೆ ಯಾವಾಗಲೂ ಬರುತ್ತೇನೆ, ನೀವು ಭೇಟಿಯಾಗಿಲ್ಲ ಅಷ್ಟೇ ಅಂದರು.ಮಾತು ಮುಂದುವರೆಸಿದ ಅಭಿಮಾನಿ ''ಈ ಬಾರಿ ನಮ್ಮೂರಿಗೆ ಬಂದಾಗ ನಮ್ಮ ಮನೆಗೆ ಬನ್ನಿ, ನಮ್ಮದು ಸಿಂಗಲ್ ಬೆಡ್ ರೂಂ, ನಾನು ಮತ್ತು ನೀವು ಉಳಿದುಕೊಳ್ಳಬಹುದು. ನನ್ನ ಹೆಂಡತಿ ಇರ್ತಾಳೆ. ಆದ್ರೂ, ಅವಳು ಅಡ್ಜಸ್ಟ್ ಮಾಡಿಕೊಳ್ತಾರೆ'' ಎಂದು ದ್ವಂದ್ವಾರ್ಥದಲ್ಲಿ ಮಾತನಾಡಿದರು. ಇದು ಸ್ವತಃ ರಾಗಿಣಿ ಅವರಿಗೆ ಮುಜುಗರ ಜೊತೆ ಆಶ್ಚರ್ಯ ಉಂಟು ಮಾಡಿತು.

kannada actress Ragini Dwivedi recently spoke to one of her fans over a call during a show and their conversation will blow your mind